Thursday, April 1, 2010

ಮರ್ಯಾದಾ ಹತ್ಯೆ - Honour Killings

"ಮರ್ಯಾದಾ ಹತ್ಯೆ (Honour killings)" - ಇದೇನೋ ಹೊಸ ವಿಷಯ ಎಂದಿರಾ? ಹೌದು ಇದು ನನಗೆ, ನಿಮಗೆ ಹೊಸ ವಿಷಯ. ಆದರೆ ಉತ್ತ್ರರ ಭಾರತದಲ್ಲಿ ಹೊಸದೇನಲ್ಲ ಬಿಡಿ. ವರ್ಷಕ್ಕೆ ಅಂದಾಜು ಸುಮಾರು ೧೦೦ ಯುವ ಜೋಡಿಗಳು Honour Killingನ ಫಲವಾಗಿ ಜೀವ ಕಳೆದುಕೊಳ್ಳುತ್ತಿವೆ. Honour Killing ಹಾಗಂದರೇನು? ಉತ್ತರಭಾರತದಲ್ಲಿ ಒಂದೇ ಗೋತ್ರಕ್ಕೆ ಸೇರಿರುವ ಹುಡುಗ-ಹುಡುಗಿ ಮದುವೆ ಆಗುವ ಹಾಗಿಲ್ಲ. ಹಾಗೇ ಮದುವೆ ಆಗಿದ್ದೇ ಆದರೆ ಅವರೀರ್ವರ ಜೀವ ತೆಗೆಯುವುದೇ Honour Killing. ಇದೇ ತೆರನಾದ Honour Killing ಮಾಡಿದಂಥ ಐದು ಮಂದಿಗೆ ಹರಿಯಾಣದ ನ್ಯಾಯಾಲಯವೊಂದು ಮರಣದಂಡನೆ ಶಿಕ್ಷೆ ನೀಡಿದೆ.

ಅದೇನೆ ಇರಲಿ, ಹುಟ್ಟಿದಾಗಿನಿಂದ ಜೊತೆಗಿದ್ದು, ಸಾಕಿ ಸಲಹಿ, ಬೆಳೆಯಲು ತಂದೆ-ತಾಯಿ ಬೇಕು. ಆದರೆ ಅದೇ ಹದಿಹರೆಯದ ಹುಚ್ಹು ಕೋಡಿಯಲ್ಲಿ ತೇಲಿ ಪ್ರೀತಿ-ಪ್ರೇಮದ ವಿಷಯ ಬಂದಾಗ ತೋಳೇರಿಸಿ, ತೊಡೆ ತಟ್ಟಿ ನಿಲ್ಲುವ ಹುಡುಗ-ಹುಡುಗಿಯರಿಗೆ ಏನಾಗಿದೆ? ಹೇಳಿ ಕೇಳಿ ನಮ್ಮ ಭರತ ಖಂಡ ಸಂಸ್ಕೃತಿ, ಆಚಾರ-ವಿಚಾರವನ್ನು ಹೊಂದಿರುವಂಥ ದೇಶ. ಅನಾದಿ ಕಾಲದಿಂದಲೂ ಭಾರತ ದೇಶದ ಸಂಸ್ಕೃತಿ ಆಚಾರ ವಿಚಾರದ ಮೇಲೆ ಪರಕೀಯರ ದಾಳಿ ನಡೆದೇ ಇದೆ, ನಡೆಯುತ್ತಿದೆ, ಅದು ನಿರಂತರ.
ಹಾಗಾಗಿ ಯುವಜನತೆಯು ಕೂಡ ತಂದೆ-ತಾಯಿಯರ, ಹಿರಿಯರ, ಹಿತೈಷಿಗಳ ಸಲಹೆ-ಸೂಚನೆಗಳನ್ನು ಅನುಸರಿಸಿದರೆ ಬಾಳು ಹಸನಾದೀತು...

ಟಿಪ್ಪಣಿ: ನ್ಯಾಯಾಲಯದ ಆದೇಶದ ವಿರುದ್ಧ ಹರಿಯಾಣದ Khap ಜನಾಂಗ ಈಗ ಸಿಡಿದೆದ್ದು ನಿಂತಿದೆ. ಸಂವಿಧಾನದ ಪ್ರತಿಗಳನ್ನು ಸುಡುವುದಾಗಿ ಹೇಳಿಕೆ ನೀಡಿದೆ. ಅವರೆಲ್ಲ ಈಗ ಎದ್ದು ನಿಂತಿರುವುದು ತಮ್ಮ ಸಂಸ್ಕ್ರೃತಿ, ಅನಾದಿಕಾಲದಿಂದಲು ಕಾಪಾಡಿಕೊಂಡು ಬಂದಂಥ ಆಚಾರ-ವಿಚಾರಗಳ ಸಲುವಾಗಿ. ಯಾವಾಗಲು ಒಂದು ದೇಶ ಸಾಂಸ್ಕೃತಿಕವಾಗಿ ಉನ್ನತ ಮಟ್ಟದಲ್ಲಿರಬೇಕಾದರೆ, ಅದು ಬುಡಮಟ್ಟದಿಂದ ಆರಂಭವಾಗಬೇಕು, ಅದೇ ಕೆಲಸವನ್ನು ಅಲ್ಪ-ಸ್ವಲ್ಪವಾದರು Khap ಜನಾಂಗ ಮಾಡುವತ್ತ ಒಲವು ತೋರಿರುವುದು ಕೊಂಚ ಸಮಾಧಾನದ ಸಂಗತಿ..

No comments:

Post a Comment